ಇದು ನಮ್ಮ ಮೊದಲನೆಯ ಚಾರಣಿ. ನಾವು ತಡಿಯನ್ದಮೊಲ್ ಟ್ರೆಕ್ಕಿಂಗ್ ಹೋಗ್ಬೇಕು ಅಂತ ಬಹಳ ದಿವಸ್ ದಿಂದ ಅಂದ್ಕೊಂಡಿದ್ವಿ, ಕದೆಕ ಎಪ್ರಿಲ್ ನ್ಯಾಗ್ ಹೋಗುದ್ ಅಂತ ನಾನು, ಪ್ರವೀಣ್ ಮತ್ ದಿಲೀಪ್ ಡಿಸೈಡ್ ಮಾಡಿದ್ವಿ. ತಡಿಯನ್ದಮೊಲ್ ಮಡಿಕೇರಿ li ದೊಡ್ಡ ಬೆಟ್ಟ, ಅದ ಇರಲಿ, ಮೂರ್ ಟಿಕೆಟ್ ಮಡಿಕೇರಿಗೆ ಬುಕ್ ಮಾಡ್ಸೆ ಬಿಟ್ವಿ. ಆವತ್ತ ಎಪ್ರಿಲ್ ೧ ನೇ ತಾರೀಖು ೨೦೧೦ ಸಂಜೀಕ ೫.೩೦ ಕ ಬಸ್ ಬಿಡ್ತು.
ಎಪ್ರಿಲ್ ೨, ಮುಂಜೆಲೆ ೬ ಘಂತೆಕ್ ನಾವು ಮಡಿಕೇರಿಗೆ ಬಂದ್ವಿ. ಅಲ್ಲೇ ಬಸ್ ಸ್ಟ್ಯಾಂಡ್ ನ್ಯಾಗ್ ಫ್ರ್ಶ್ ಆಗಿ ೭ ಘಂತೆಕ್ ಅಂದ್ರ ಉಪ್ಪಿಟ ತಿಂದ ಚಾ ಕುಡದ್ ಮಡಿಕೇರಿ ಪ್ರೈವೇಟ್ ಬಸ್ ಸ್ಟ್ಯಾಂಡ್ ಗೆ ಬಂದ್ವಿ. ಅಲ್ಲೇ ಕಕ್ಕಬೆ ಬಸ್ ಎಷ್ಟ ಘಂಟೆಕ್ ಐತಿ ಅಂತ ಕೇಳಿದ್ವಿ. ಆ ಬಸ್ ೮ ಘಂಟೆಕ್ ಇತ್ತು. ಸರಿ ಅಂತ ಹೇಳಿ ವೇಟ್ ಮಾಡು ಹೊತ್ತಿಗೆ ಬಸ್ ಬಂದಬಿಡ್ತು.
ಕಕ್ಕಬೆಯಿಂದ ಸ್ವಲ್ಪ ಮುಂದ ಹೋಗಿ ಕೈಕಂಬ ಸ್ಟಾಪ್ ಗೆ ಇಳಕೊಂಡವಿ. ನಾಲ್ಕುನಾಡು ಅರಮನೆ ಗೆ ಹೋಗಲಿಕ್ಕೆ ೩ ಕಿಲೋಮೀಟರ್ ನಡಕೊಂತ ಹೋದ್ವಿ ಅರಮನಿ ಸಿಕ್ತು. ಇದ ನೋಡ್ರಿ ಅರಮನಿ.
Nalknad Palace |
School Biside the palace |
ನೋಡ್ರಿ ಈ ಅರಮನಿಯಿಂದ ನಮ್ಮ ಟ್ರೆಕ್ಕಿಂಗ್ ಚಾಲೂ ಆಗುದು. ಆವಾಗ ಟೈಮ್ ೧೦.೫೦-೧೧.೦೦ ಆಗೆಬಿಟ್ಟಿತ್ತು, ಹಂಗ ಮುಂದ್ ಹೋದ್ವಿ ಹೋದ್ವಿ ಹೋದ್ವಿ ಫಸ್ಟ್ ೩ ಕಿಲೋ ಮೀಟರ್ ಡಾಂಬರ್ ರೋಡ್, ಆಮೇಲೆ ಮುಂದ್ ಹೋದಂಗ್ ಹೋದಂಗ್ ರೋಡ್ ಸಣ್ಣದ ಆಕ್ಕೊಂತ ಹೋತು, ಎಲ್ಲರಿಗೂ ಭಾಳ್ ಸುಸ್ತ್ ಆಗ್ತಿತ್ತು, ಅಲ್ಲಲ್ಲೇ ನಿಂತಗೊಂತ, ನೀರ್ ಕುಡಕೊಂತ, ಗ್ಲೂಕೋಸ್ ತಿನ್ಕೊಂತ ಹೋದ್ವಿ ಹಂಗ ಮುಂದ. ನೋಡ್ರಿ ಮ್ಯಾಲೆ ಯಲ್ಲೂ ನೀರ್ ಸಿಗುದಿಲ್ಲ, ಅದಕ್ಕ ನೀರ್ ಫುಲ್ ಸ್ಟಾಕ್ ಮಾಡ್ಕೊಂದ ಹೋಗಿರಬೇಕು, ನಾವ್ ಅಂತು ಫುಲ್ ನೀರ್ ಸ್ಟಾಕ್ ಮಾಡ್ಕೊಂಡ ಹೋಗಿದ್ವಿ.
ಕಾರ್ರೆಕ್ಟಾಗಿ ೩.೩೦ ಭಾಳ್ ಹಸಿವ್ ಆಗಿತ್ತು ಅನ್ನು ಅಷ್ಟ್ರಾಗ ಒಂದ್ ಚೊಲೋ ಪ್ಲೇಸ್ ಸಿಕ್ತು, ಅಲ್ಲೇ ಟೆಂಟ್ ಹಕೆಬಿಟ್ವಿ. ಊಟ ಗೀಟ ಮಾಡಿ ಸ್ವಲ್ಪ ಫೋಟೋ ಗೀಟೋ ಹೊಡದ್ ೮ ಘಂತೆಕ್ ಅಂದ್ರ ಕ್ಯಾಂಪ್ ಫೈರ್ ಮಾಡಿ ಮೊಕ್ಕೊಂಡ್ ಬಿಟ್ವಿ. ಮುಂಜೆಲೆ ಎದ್ದ ಟಾಪ್ ಮುಟ್ಟಾಕ್ ಒಂದ್ ತಾಸ್ ಬೇಕಾಗಿತ್ತು.
ಮತ್ತ ದಾರಿಯಾಗ ೩-೪ ಮಂದಿ ಭೆಟ್ಟಿ ಆದರು, ಅವ್ರ ಕೂಡ ಮಾತಕೊಂತ ಹೋದ್ವಿ. ಅದರಾಗ್ ಇಬ್ಬರು ಬೆಂಗಳೂರುದಿಂದ ಬಂದಿದ್ರು ಮತ್ತ ಇನ್ನೊಬ್ಬೆಕಿ ಹ್ಯಾಂಗ್-ಕಾಂಗ್ ದಿಂದ ಬಂದಿದ್ದಳು, ಎಲ್ಲರು ಕೂಡಿ ಒಟ್ಟ ಆರು ಮಂದಿ ಆದ್ವಿ, ಸ್ವಲ್ಪ ಮುಂದ್ ಹೋದಮ್ಯಾಲೆ ಆ ಹುಡುಗಿ ವಾಪಸ್ ಹೋದಳು, ನಾವು ಮುಂದ್ ಹೋದ್ವಿ.
ಎಪ್ರಿಲ್ ೩ ನೇ ತಾರೀಕು ಮುಂಜೇಲೆ ೪ ಘಂತೆಕ್ ಎದ್ವಿ, ಎಲ್ಲ ಬ್ಯಾಗ್ ಗೀಗ್ ಪ್ಯಾಕ್ ಮಾಡ್ಕೊಂಡ ಗುಡ್ಡದ ಮ್ಯಾಗ್ ಹೋಗಾಕ್ ತಯಾರ್ ಆದ್ವಿ, ಪೂರ್ತಿ ಕತ್ತಲ. ಸುತ್ತಲ್ಲ ಕಾಡು, ಮುಂದ್ ನೋಡಿದ್ರ ಏನೂ ಕಾಣಕತ್ತಿದ್ದಿಲ್ಲ ೩ ಬ್ಯಾಟರಿ ಇದ್ವ್ ಅಷ್ಟ, ಕಡೆಕ್ ಹಂಗ ಹಿಂಗ ಮಾಡಿ ತುದಿ ಮುಟೀದ್ವಿ ಅವಾಗ್ ಟೈಮ್ ಕಾರ್ರೆಕ್ಟಾಗಿ ೬.೦೦ ಘಂಟೆ ಆಗಿತ್ತು, ಥಂಡಿ ಅಂದ್ರ ಥಂಡಿ ಸಿಕ್ಕಾಪಟ್ಟೆ. ಆದರು ನೋಡಾಕ್ ಅನ್ಟ್ರು ಭಾರ್ರಿ ಇತ್ತ ಮತ್ತ. ನಾವ್ ೧೭೪೨ ಮೀಟರ್ ಮ್ಯಾಲ್ ಇದ್ವಿ, ಕೆಳಗ್ ನೋಡಿದ್ರ ಫುಲ್ ಮೋಡ, ನಾವ್ ಅನ್ಟ್ರು ಫುಲ್ ಜಿಗದಾಡಿದ್ದ ಜಿಗದಾಡಿದ್ದ, ನೋಡಾಕ್ ಎರಡ ಕಣ್ಣು ಸಾಲುದಿಲ್ಲ, ಅದನ್ನ ಹೇಳಾಕ್ ಆಗುದಿಲ್ ಅಷ್ಟ ಮಸ್ತ್ ಇತ್ತು.
Me on the peak |
No comments:
Post a Comment